ಪ್ರೇಮ್ ಕುಮಾರ್ (ಜನನ ೧೮ ಏಪ್ರಿಲ್ ೧೯೭೬) ಇವರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕ. ಪ್ರಾಣ(೨೦೦೪) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನೆನಪಿರಲಿ (೨೦೦೫) ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅಂದಿನಿಂದ, ಪ್ರೇಮ್‌ಗೆ ರೊಮ್ಯಾಂಟಿಕ್ ಥೀಮ್‌ನ ಚಿತ್ರಗಳನ್ನು ಹೆಚ್ಚಾಗಿ ನೀಡಲಾಯಿತು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಲವ್ಲಿ ಸ್ಟಾರ್ ಎಂಬ ಬಿರುದನ್ನು ಗಳಿಸಿದರು. ಪ್ರೇಮ್ ಪ್ರಮುಖ ಚಲನಚಿತ್ರದಲ್ಲಿ ನಟಿಸಿದಾರೆ. ಜೊತೆ ಜೊತೆಯಲಿ (೨೦೦೬), ಪಲ್ಲಕ್ಕಿ (೨೦೦೭), ಗುಣವಂತ (೨೦೦೭), ಸವಿ ಸವಿ ನೆನಪು (೨೦೧೦) , ಚಾರ್ಮಿನಾರ್ (೨೦೧೩) ಇದು ಪ್ರೇಮ್ ಅವರ ಗಮನಾರ್ಹ ಚಿತ್ರಗಳು. ಚೌಕ (೨೦೧೭) ಮತ್ತು ಪ್ರೇಮಂ ಪೂಜ್ಯಂ (೨೦೨೧) ಇದು ನಟನಾಗಿ ಅವರ ೨೫ನೇ ಚಿತ್ರವಾಗಿದೆ. == ವೃತ್ತಿ == ಪ್ರೇಮ್ ೨೦೦೪ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ೨೦೦೫ರಲ್ಲಿ ನೆನಪಿರಲಿ ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ೨೦೦೬ರಲ್ಲಿ, ಪ್ರೇಮ್ ನಟಿ ರಮ್ಯಾ ಜೊತೆ ಜೊತೆ ಜೊತೆಯಲಿ ಚಿತ್ರದಲ್ಲಿ ನಡಿಸಿದರು. ಅವರ ಪಲ್ಲಕ್ಕಿ ಚಲನಚಿತ್ರವು ೧೦೦ ದಿನಗಳ ಕಾಲ ಉತ್ತಮ ಪ್ರದರ್ಶನ ನೀಡಿತು. ೨೦೦೮ ರಲ್ಲಿ, ಹೊಂಗನಸು ಚಿತ್ರಕ್ಕಾಗಿ ಪ್ರೇಮ್ ಮತ್ತೊಮ್ಮೆ ರತ್ನಜನ ಜೊತೆ ಸೇರಿಕೊಂಡರು. ತಮಿಳಿನ ಆಹಾ ಚಿತ್ರದ ರಿಮೇಕ್ ಆಗಿರುವ ಘೌತ್ತಂ ಚಿತ್ರದಲ್ಲಿ ಪ್ರೇಮ್ ೨೦೦೯ರಂದು ನಟಿಸಿದ್ದರು. ೨೦೧೦ರಲ್ಲಿ, ಅವರು ಜೊತೆಗಾರ ಚಿತ್ರಕ್ಕಾಗಿ ನಾಯಕಿ ರಮ್ಯಾ ಜೊತೆ ಸೇರಿಕೊಂಡರು. ಇವರು ಶಿವರಾಜಕುಮಾರ್ ಅವರ ಪ್ರವಾಸದ ಸಂಭ್ರಮದ ಚೆಲುವೆಯೇ ನಿನ್ನ ನೋಡಲು ಮತ್ತು ಅನಂತ್ ನಾಗ್ ಮತ್ತು ಸುಹಾಸಿನಿ ಅವರು ನಟಿಸಿರುವ ಎರಡನೆ ಮದುವೆ ಚಲನಚಿತ್ರದಲ್ಲಿ ಅತಿಥಿ ಪಾತ್ರವನ್ನು ವಹಿಸಿದರು. ೨೦೧೩ರಲ್ಲಿ, ಇವರು ನಿರ್ದೇಶಕಿ ರೂಪ ಅಯ್ಯರ್ ಅವರ ಚಂದ್ರ ಚಿತ್ರದಲ್ಲಿ ನಟಿಸಿದರು. ಚಾರ್ಮಿನಾರ್ ಚಿತ್ರದ ಮೂಲಕ ಇವರು ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಶತ್ರು ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು. ೨೦೧೭ರಲ್ಲಿ, ದ್ವಾರಕೀಶ್ ಅವರ ೫೦ನೇ ನಿರ್ಮಾಣದ ಚೌಕಾ ಚಲನಚಿತ್ರದಲ್ಲಿ ಪ್ರೇಮ್ ಜೈಲು ಕೈದಿಗಳಲ್ಲಿ ಒಬ್ಬರಾಗಿ ನಟಿಸಿದರು. == ದೂರದರ್ಶನ == === ಚಲನಚಿತ್ರಗಳು === ಪ್ರೇಮ್ ಕುಮಾರ್‌ರವರ ನಟಿಸಿರುವ ಚಲನಚಿತ್ರಗಳು === ರಿಯಾಲಿಟಿ ಶೋ === == ಉಲ್ಲೇಖಗಳು ==